ಛಾಯಾ ಶಂಕು -
ಬೆಳಕಿನ ಆಕಾರದ ಕಾರಣವಾಗಿ ಗ್ರಾಹಕ ವಸ್ತುವಿನಿಂದ ಹೊರಚಾಚುವ ನೆರಳಿನ ಪ್ರದೇಶ (ಷ್ಯಾಡೊ ಕೋನ್). ಖಗೋಳವಿಜ್ಞಾನದಲ್ಲಿ ಬಳಕೆಯಲ್ಲಿರುವ ಪದ. ಸೂರ್ಯನಿಂದ ಭೂಮಿಯ ಮೇಲೆ ಇಲ್ಲವೇ ಚಂದ್ರನ ಮೇಲೆ ಬೆಳಕು ಬಿದ್ದಾಗ ಭೂಮಿಯ ಮೇಲೆ ಇಲ್ಲವೇ ಚಂದ್ರನ ನೆರಳು ಹಿಂಬದಿಗೆ ಚಾಚುವುದು ಸರಿಯಷ್ಟೆ. ಇವು ಮೂರು ಕಾಯಗಳೂ ಗೋಳಾಕಾರವಾಗಿರುವುದರಿಂದ ಈ ನೆರಳುಗಳಲ್ಲಿ ಎರಡು ವರ್ಗದವು ಇವೆ; ದಟ್ಟ ನೆರಳಿನ ಪ್ರದೇಶ-ಇದು ಶಂಕ್ವಾಕಾರವಾಗಿರುವುದು ; ಅರೆ ನೆರಳಿನ ಪ್ರದೇಶ. ದಟ್ಟ ನೆರಳಿನ ಪ್ರದೇಶಕ್ಕೆ ಛಾಯಾ ಶಂಕುವೆಂಬ ಹೆಸರು ಕೂಡ ಬಳಕೆಯಲ್ಲಿದೆ.
(ನೋಡಿ- ಗ್ರಹಣ,-ಖಗೋಳೀಯ)	                                             *
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ